Sunday, February 22, 2009
ಅವಧಿ ಮ್ಯಾಗಝಿನ್
ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ಆತನ ಪತ್ನಿ 'ಬೈಬಲ್' ಹಿಡಿದಿರುತ್ತಾಳೆ. ಅಧ್ಯಕ್ಷೀಯ ಅಭ್ಯರ್ಥಿ ತನ್ನ ಬಲಗೈಯನ್ನು ಮೇಲೆತ್ತಿ, ಎಡಗೈಯನ್ನು ಆ ಬೈಬಲ್ ಮೇಲಿಟ್ಟು ಪ್ರಮಾಣ ವಚನ ಸ್ವೀಕರಿಸುತ್ತಾನೆ. ಈ ಕಾರ್ಯಕ್ರಮ ಅಮೆರಿಕದ ಕ್ಯಾಪಿಟಾಲಿನ ಮುಂದೆ, ವಿಶಾಲ ವೇದಿಕೆಯಲ್ಲಿ ನಡೆಯುತ್ತದೆ. ಒಬಾಮಾ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ದಿನ, ಈ ಸಂದರ್ಭವನ್ನು ಚೆನ್ನಾಗಿ ಬಿಂಬಿಸುವ ಚಿತ್ರ ನನಗೆ ಬೇಕಿತ್ತು. ಅಂದು ನನಗದು ಸಿಕ್ಕಿರಲಿಲ್ಲ. ಆದರೆ, ಕಳೆದವಾರ ದಿಢೀರನೆ ಕಾಣಿಸಿತಲ್ಲಾ ಆ ಫೋಟೋ! ಬಿಲಿಯನ್ ಫೋಟೋಗಳ ನಡುವೆ ಒಂದೇ ಒಂದು ಅದ್ಭುತ ಫ್ರೇಮ್ ! ಹಾಗಾಗಿ, ಆ ಫೋಟೋ ಕುರಿತು ಈ ನಾಲ್ಕು ಮಾತು ಹೇಳಲೇ ಬೇಕು ಅನ್ನಿಸಿತು, ನಮ್ಮ ಅಕಾಡೆಮಿಕ್ ಆಸಕ್ತಿಗೋಸ್ಕರ.
Subscribe to:
Comments (Atom)